ಕನಕಮುನಿ : ಶಾಕ್ಯಮುನಿಬುದ್ಧನೂ ಸೇರಿ ಏರ್ಪಡುವ ಇಪ್ಪತ್ತನಾಲ್ಕು ಮಂದಿ ಬುದ್ಧರಲ್ಲಿ ಇಪ್ಪತ್ತಮೂರನೆಯವ. ಪಾಳಿಯಲ್ಲಿ ಇವನಿಗೆ ಕೋಣಾಗಮನ ಎಂಬ ಹೆಸರಿದೆ. ಅಶೋಕ ಕನಕಮುನಿಯ ಸ್ತೂಪವನ್ನು ಸಂದರ್ಶಿಸಿ ಶಿಥಿಲವಾಗಿದ್ದ ಆ ಸ್ತೂಪವನ್ನು ಪುನರ್ನಿರ್ಮಾಣ ಮಾಡಿಸಿದನೆಂದು ಶಿಲಾಶಾಸನವೊಂದು ಹೇಳುತ್ತದೆ. ಎಂದಮೇಲೆ ಕನಕಮುನಿ ಐತಿಹಾಸಿಕ ವ್ಯಕ್ತಿಯಾಗಿದ್ದನೆಂದು ತಿಳಿಯಬಹುದು. ಬುದ್ಧವಂಶದಲ್ಲಿ ಉಲ್ಲೇಖಿತವಾಗಿರುವ ಇಪ್ಪತ್ತನಾಲ್ಕು ಬುದ್ಧರಲ್ಲಿ ಬಹುಶಃ ಬಹುಮಂದಿ ಚಾರಿತ್ರಿಕ ವ್ಯಕ್ತಿಗಳಲ್ಲ.	(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ